ಮುನ್ನುಡಿ
ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳಿಗೆ ವೃತ್ತಿಪರ ಚಿಕಿತ್ಸೆ ಹಾಗೂ ಇತರ ಸೇವೆಗಳನ್ನು ಪಡೆಯುವಲ್ಲಿ ಇರುವ ಭೌಗೋಳಿಕ ಸಮಸ್ಯೆಗಳಿಗೆ ಪರಿಹಾರವಾಗಿ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯಲ್ಲಿ “ತಲುಪಿಲ್ಲದವರನ್ನು ತಲುಪುವುದು" ಎಂಬ ಧ್ಯೇಯವಾಕ್ಯದೊಂದಿಗೆ ’ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ಟೆಲಿ ಕೇಂದ್ರ’ವನ್ನು (Tele-center for Persons with Communication Disorders –ಟಿಸಿಪಿಡಿ) ಸ್ಥಾಪಿಸಲಾಯಿತು. ಕೇಂದ್ರವು ಮುಖ್ಯವಾಗಿ ಅತ್ಯಾಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಬಳಸಿ ಟೆಲಿ ಮಾಧ್ಯಮದ ಮೂಲಕ ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳು, ಅವರ ಪೋಷಕರು / ಆರೈಕೆದಾರರ ಮನೆ ಬಾಗಿಲಿಗೆ ಸಂವಹನ ನ್ಯೂನತೆಗಳ ಮೌಲ್ಯಮಾಪನ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತದೆ.
ಇದರೊಂದಿಗೆ, ನೇರ ಫೋನ್ ಇನ್ ಕಾರ್ಯಕ್ರಮಗಳು, ಸಂವಹನ ನ್ಯೂನತೆಗಳ ಬಗ್ಗೆ ವಿವಿಧ ಶಾಲೆಗಳ ಶಿಕ್ಷಕರಿಗೆ ಟೆಲಿ ಮಾಧ್ಯಮದ ಮೂಲಕ ಅಭಿಶಿಕ್ಷಣ ಕಾರ್ಯಕ್ರಮಗಳು, ಸಾರ್ವಜನಿಕ ಶಿಕ್ಷಣ ಸಾಮಗ್ರಿಗಳ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ಇದಲ್ಲದೆ, ಕೇಂದ್ರವು ಹಲವಾರು ಸಂಶೋಧನೆಗಳು ಮತ್ತು ವೈಜ್ಞಾನಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಕೇಂದ್ರದ ವೃತ್ತಿಪರರು ವಾಕ್ ಮತ್ತು ಶ್ರವಣದ ವಿದ್ಯಾರ್ಥಿಗಳಿಗೆ ಚಿಕಿತ್ಸಾ ತರಬೇತಿಯನ್ನು ಸಹ ನೀಡುತ್ತಾರೆ.
ಗುರಿ ಹಾಗೂ ಉದ್ದೇಶಗಳು
ಕೇಂದ್ರವು ವಾಕ್ ಮತ್ತು ಶ್ರವಣ ದೋಷ ಹೊಂದಿರುವ ವ್ಯಕ್ತಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ (ICT) ಮೂಲಕ ಮೌಲ್ಯಮಾಪನ ಮತ್ತು ತರಬೇತಿ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ.
ಟೆಲಿ ಕೇಂದ್ರದ ಪ್ರಾಥಮಿಕ ಉದ್ಧೇಶಗಳು ಹೀಗಿವೆ:
• ಚಿಕಿತ್ಸಾ ಸೇವೆಗಳು: ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳಿಗೆ ಟೆಲಿ-ಮೌಲ್ಯಮಾಪನ ಮತ್ತು ತರಬೇತಿ (ಚಿಕಿತ್ಸೆ, ಸಮಾಲೋಚನೆ, ಮತ್ತು ಅಭಿಶಿಕ್ಷಣ ಕಾರ್ಯಕ್ರಮ, ಪೋಷಕರಿಗೆ ಮಾರ್ಗದರ್ಶನ ಹಾಗೂ ತರಬೇತಿ) ಒದಗಿಸುವುದು.
• ಸಾರ್ವಜನಿಕ ಶಿಕ್ಷಣ: ಸಂವಹನ ನ್ಯೂನತೆಗಳ ಬಗ್ಗೆ ಸಂಪನ್ಮೂಲ ಸಾಮಗ್ರಿಗಳ ಅಭಿವೃದ್ಧಿ, ಜಾಗೃತಿ ಮತ್ತು ಟೆಲಿ-ಅಭಿಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವುದು.
• ಮಾನವ ಸಂಪನ್ಮೂಲ ಅಭಿವೃದ್ಧಿ: ವಾಕ್ ಮತ್ತು ಶ್ರವಣ ಪದವೀಧರರಿಗೆ ಮತ್ತು ಸ್ನಾತಕೋತ್ತರ ಪದವೀಧರರಿಗೆ ಚಿಕಿತ್ಸಾ ತರಬೇತಿ ನೀಡುವುದು
• ಸಂಶೋಧನೆ: ವಿವಿಧ ಸಂಶೋಧನಾ ಚಟುವಟಿಕೆಗಳನ್ನು ನಡೆಸುವುದು.
ಫ್ಯಾಕಲ್ಟಿ ಸದಸ್ಯರು / ಸಿಬ್ಬಂದಿ
ಫೋಟೋ | ಹೆಸರು |
---|---|
ಡಾ.ಎಸ್.ಪಿ.ಗೋಸ್ವಾಮಿ ಭಾಷಾ ರೋಗಶಾಸ್ತ್ರದಲ್ಲಿ ಪ್ರೊಫೆಸರ್ ಮತ್ತು ಮುಖ್ಯಸ್ಥರು - ಸಂವಹನ ಅಸ್ವಸ್ಥತೆಗಳಿರುವ ವ್ಯಕ್ತಿಗಳಿಗಾಗಿ ಟೆಲಿ-ಸೆಂಟರ್ Ph Off : 0821 2502320 Email: goswami16@aiishmysore.in |
|
ಶ್ರೀಮತಿ ಮಮತಾ ಎನ್ ಎಂ. M.Sc (ಆಡಿಯಾಲಜಿ) ಆಡಿಯಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕ (ನಿಯೋಜಿತ ಸಿಬ್ಬಂದಿ) |
|
ಡಾ.ಯಶಸ್ವಿನಿ ಆರ್ ಪಿಎಚ್‌ಡಿ (ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿ) ಕ್ಲಿನಿಕಲ್ ಸೂಪರ್‌ವೈಸರ್ |
|
ಶ್ರೀ ಗಂಡಿಕೋಟ ವೆಂಕಟೇಶ ಕಾರ್ಯನಿರ್ವಾಹಕ ಸಹಾಯಕ ಗ್ರೇಡ್ 2 (ಅರ್ಧ ದಿನ) |
|
ಶ್ರೀಮತಿ ವನಮಾಲಾ ಎಂಟಿಎಸ್ Ph Off : +91-0821-2502-703 |
|
ಚಟುವಟಿಕೆಗಳು
ವಿಶ್ವ ಶ್ರವಣ ದಿನ – 2021
2021 ರ ವಿಶ್ವ ಶ್ರವಣ ದಿನಾಚರಣೆಯ ಅಂಗವಾಗಿ, ಕೇಂದ್ರವು ವಿವಿಧ ವಿಷಯಗಳನ್ನು ಕುರಿತು ಒಟ್ಟು ಏಳು ನೇರ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿ, ಶ್ರವಣದೋಷಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಷಯ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳು ದೂರವಾಣಿ ಕರೆಗಳ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾದರು. ಇವನ್ನು ಸಂಸ್ಥೆಯ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ನೇರಪ್ರಸಾರ ಮಾಡಲಾಯಿತು.
ಚರ್ಚೆಯ ವಿವಿಧ ವಿಷಯಗಳು ಹೀಗಿವೆ:
1. 08.01.2021 - "ಕಿವಿಗಳ ಕಾಳಜಿ"
2. 22.01.2021 - “ಮಧ್ಯ ಕಿವಿಯ ಸೋಂಕುಗಳು ಮತ್ತು ಪರಿಣಾಮಗಳು”
3. 05.02.2021 - “ಜೀವನಶೈಲಿ ಮತ್ತು ಶ್ರವಣ ದೋಷ”
4. 19.02.2021 - "ಗುರುತಿಸುವಿಕೆ ಮತ್ತು ನಿರ್ವಹಣೆ"
5. 26.02.2021 – “ಸ್ಪಂದನಾ, ಶ್ರವಣದೋಷವುಳ್ಳ ಮಗುವಿನ ಯಶಸ್ಸಿನ ಕಥೆ."
6. 03.03.2021 - “ವಿಶ್ವ ಶ್ರವಣ ದಿನದ ಪ್ರಾಮುಖ್ಯತೆ”
7. 19.03.2021 - “ಶ್ರವಣ ದೋಷವಿರುವ ವ್ಯಕ್ತಿಗಳ ಪುನರ್ವಸತಿ”
ವಿಶ್ವ ಆಟಿಸಂ ಜಾಗೃತಿ ಮಾಸ 2021
ವಿಶ್ವ ಆಟಿಸಂ ಜಾಗೃತಿ ಮಾಸದ ಆಚರಣೆಯ ಅಂಗವಾಗಿ ಕೇಂದ್ರ ಹಾಗೂ ಎಎಸ್‌ಡಿ ಘಟಕವು ನೇರ ಫೋನ್ ಇನ್ ಕಾರ್ಯಕ್ರಮಗಳು, ಟೆಲಿ-ಅಭಿಶಿಕ್ಷಣ ಕಾರ್ಯಕ್ರಮಗಳು, ಸಾರ್ವಜನಿಕ ಜಾಗೃತಿಗಾಗಿ ಎಲ್‌ಇಡಿ ಪ್ರದರ್ಶನಕ್ಕಾಗಿ ವೀಡಿಯೊಗಳು ಮತ್ತು ಪೋಸ್ಟರ್ ಗಳ ಅಭಿವೃದ್ಧಿ, ಹಾಗೂ ಜನಸಾಮಾನ್ಯರಲ್ಲಿ ಆಟಿಸಂ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಸ್ಥೆಯ ಆಡಳಿತ ವಿಭಾಗದಲ್ಲಿ ’ಲೈಟ್ ಇಟ್ ಬ್ಲೂ’ ಎಂಬ ಪರಿಕಲ್ಪನೆಯಡಿ ಕಾರ್ಯಕ್ರಮ ಆಯೋಜನೆ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ಕೈಗೊಂಡಿತು.
ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಕೇಂದ್ರವು 2 ನೇರ-ಫೋನ್ ಇನ್ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ವಿಷಯ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳು ದೂರವಾಣಿ ಕರೆಗಳ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾದರು. ಕಾರ್ಯಕ್ರಮಗಳನ್ನು ಸಂಸ್ಥೆಯ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ನೇರಪ್ರಸಾರ ಮಾಡಲಾಯಿತು..
1. 01.04.2021 - “ವಿಶ್ವ ಆಟಿಸಂ ಜಾಗೃತಿ ದಿನದ ಪ್ರಾಮುಖ್ಯತೆ”
2. 23.04.2021 - “ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಹೊಂದಿರುವ ಮಗು ಹಾಗೂ ಅವರ ತಾಯಿಯ ಅನುಭವ”
ಕೇಂದ್ರೀಯ ವಿದ್ಯಾಲಯದ ಶಿಕ್ಷಕರಿಗೆ ಟೆಲಿ ಮಾಧ್ಯಮದ ಮೂಲಕ ಅಭಿಶಿಕ್ಷಣ ಕಾರ್ಯಕ್ರಮ:
ಶಾಲಾ ಮಕ್ಕಳಲ್ಲಿ ಕಂಡುಬರುವ ಸಂವಹನ ನ್ಯೂನತೆಗಳ ಕುರಿತು ಕೇಂದ್ರೀಯ ವಿದ್ಯಾಲಯದ ಶಿಕ್ಷಕರಲ್ಲಿ ಅರಿವು ಮೂಡಿಸುವ ಸಲುವಾಗಿ ಟೆಲಿ ಮಾಧ್ಯಮದ ಮೂಲಕ ಅಭಿಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇಶದಾದ್ಯಂತ 22 ಕೇಂದ್ರೀಯ ವಿದ್ಯಾಲಯದ ಶಿಕ್ಷಕರು ಕಾರ್ಯಕ್ರಮದ ಪ್ರಯೋಜನ ಪಡೆದರು. ಅದರ ಚಿತ್ರನೋಟ ಹೀಗಿದೆ:
ಸಂವಹನ ನ್ಯೂನತೆಗಳ ಪರಿಚಯ (ಮಾತು-ಭಾಷೆ ಮತ್ತು ಶ್ರವಣ ದೋಷಗಳು)
ಇ-ವಿದ್ಯಾಲೋಕ ಸ್ವಯಂಸೇವಕ ಗುಂಪಿಗೆ ಟೆಲಿ ಮಾಧ್ಯಮದ ಮೂಲಕ ಅಭಿಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಒಟ್ಟು 77 ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಚಿತ್ರನೋಟ ಹೀಗಿದೆ:
ಸಂಪನ್ಮೂಲಗಳು ಮತ್ತು ಮೂಲಸೌಕರ್ಯ
ಟೆಲಿ ಕೇಂದ್ರವು ಭಾರತದ ವಿವಿಧ ರಾಜ್ಯಗಳಿಗೆ ಮತ್ತು ಜಗತ್ತಿನಾದ್ಯಂತ ತನ್ನ ಸೇವೆಗಳನ್ನು ತಲುಪಿಸಲು ಅತ್ಯಾಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ವಿಧಾನವನ್ನು ಬಳಸುತ್ತದೆ. ಕೇಂದ್ರದಲ್ಲಿ ಈ ಕೆಳಗಿನ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿವೆ.
- ಚಿಕಿತ್ಸಾ ಸೇವೆಗಳನ್ನು ಒದಗಿಸಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸೌಲಭ್ಯಗಳು:
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಹಾಗೂ ಸಂಸ್ಥೆಯು(AIISH ) ಸಂಪರ್ಕ ಹೊಂದಿರುವ ಯಾವುದೇ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಲು ಸಾಧ್ಯವಾಗದ ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ಮನೆ ಬಾಗಿಲಿಗೆ ಟೆಲಿ-ಸೇವೆಗಳನ್ನು ಒದಗಿಸಲಾಗುತ್ತದೆ. ಟೆಲಿ-ಮೌಲ್ಯಮಾಪನ, ಟೆಲಿ-ಚಿಕಿತ್ಸೆ ಹಾಗೂ ಮಾರ್ಗದರ್ಶನ, ಟೆಲಿ-ಓರಿಯಂಟೇಶನ್ ಸೇವೆಗಳನ್ನು ಒದಗಿಸಲು ವಿವಿಧ ಅತ್ಯಾಧುನಿಕ ICT ಮಾಧ್ಯಮಗಳನ್ನು ಬಳಸಲಾಗುತ್ತದೆ.
2. ಟೆಲಿ ಕೇಂದ್ರದ ಪ್ರತ್ಯೇಕ ಜಾಲತಾಣ: ಕೇಂದ್ರವು ಪ್ರತ್ಯೇಕ ಜಾಲತಾಣವನ್ನು ಹೊಂದಿದ್ದು(www.aiishtcpd.com) ಕೇಂದ್ರದ ಉದ್ದೇಶಗಳು, ಚಟುವಟಿಕೆಗಳು, ಸೇವೆಗಳು ಮತ್ತು ಸಂಪನ್ಮೂಲ ಸಾಮಗ್ರಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಲು ಇಲ್ಲಿ ಭೇಟಿ ನೀಡಬಹುದು
3. ಮಾನವ ಸಂಪನ್ಮೂಲಗಳು:
ಕೇಂದ್ರವು ಪೂರ್ಣಾವಧಿ ಮತ್ತು ನಿಯೋಜಿತ ಅಧ್ಯಾಪಕ ಸದಸ್ಯರ ತಂಡವನ್ನು ಹೊಂದಿದ್ದು, ಇದು ವಾಕ್-ಭಾಷಾ ತಜ್ಞರು, ಶ್ರವಣಶಾಸ್ತ್ರಜ್ಞರು, ಆಡಳಿತ ಸಿಬ್ಬಂದಿ ಮತ್ತು ಬಹು-ಕಾರ್ಯಕಾರಿ ಸಿಬ್ಬಂದಿಯನ್ನು ಒಳಗೊಂಡಿದೆ.
- ಚಿಕಿತ್ಸಾ ಸಂಪನ್ಮೂಲ ವಸ್ತುಗಳ ಲಭ್ಯತೆ
ಟೆಲಿ ಕೇಂದ್ರವು ಶಾಲೆಯಲ್ಲಿ ಶೈಕ್ಷಣಿಕ ಸಮಸ್ಯೆಗಳು ಅಂದರೆ, ಓದುವ ಕೌಶಲ್ಯದಲ್ಲಿ ತೊಂದರೆ, ಬರವಣಿಗೆಯಲ್ಲಿ ತೊಂದರೆಗಳು ಅಥವಾ ಗಣಿತದ ಲೆಕ್ಕಾಚಾರಗಳನ್ನು ಬಿಡಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಟೆಲಿ-ಮಾರ್ಗದರ್ಶನವನ್ನು ನೀಡುತ್ತದೆ. ಕೇಂದ್ರವು ಶ್ರವಣದೋಷವುಳ್ಳ ಮಕ್ಕಳ ಪೋಷಕರಿಗೆ ಸಹಾಯ ಮಾಡಲು ಸಾಕಷ್ಟು ಪುಸ್ತಕಗಳನ್ನು ಸರಣಿ ರೂಪದಲ್ಲಿ ಹೊರತಂದಿದೆ. ಇವನ್ನುಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಐದು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಇವು ಮನೆಯಲ್ಲಿಯೇ ಸರಳವಾದ ಚಟುವಟಿಕೆಗಳನ್ನು ನಡೆಸುವ ಮೂಲಕ ಪೋಷಕರು ತಮ್ಮ ಮಗುವಿನ ಮಾತು ಮತ್ತು ಭಾಷಾ ಕೌಶಲ್ಯವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಹೊಂದಿವೆ.
ಇದರೊಂದಿಗೆ, ಕೇಂದ್ರವು ತಾನು ಅಭಿವೃದ್ಧಿಪಡಿಸಿರುವ ಪುಸ್ತಕಗಳನ್ನು ಮಲ್ಟಿಮೀಡಿಯಾ ರೂಪದಲ್ಲಿಯೂ ಸಹ ಹೊರತಂದಿದ್ದು [MMC] ಅವು ’ಪೋಷಕರು ಮತ್ತು ಮಗು’ ಹಾಗೂ ’ನಿಮ್ಮ ಮಗುವಿನ ತರಬೇತಿ’ ಸರಣಿಯಲ್ಲಿ ಪ್ರಕಟಗೊಂಡಿವೆ. ಇವು ಶ್ರವಣದೋಷ ಹಾಗೂ ಮಾತಿನ ಸಮಸ್ಯೆಯುಳ್ಳ ಮಕ್ಕಳಿಗೆ ತರಬೇತಿ ನೀಡಲು ಸಮಗ್ರ ಮಾಹಿತಿಯನ್ನು ಹೊಂದಿದ್ದು, ಪೋಷಕರು ಸುಲಭವಾಗಿ ವಿಷಯವನ್ನು ಗ್ರಹಿಸಿ ಮಕ್ಕಳಿಗೆ ತರಬೇತಿ ನೀಡಬಹುದು. ಪುಸ್ತಕದಲ್ಲಿ ವಿವರಿಸಲಾದ ಚಟುವಟಿಕೆಗಳನ್ನು ಒಳಗೊಂಡ ಆಡಿಯೋ-ವೀಡಿಯೋ-ಪಠ್ಯವು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://aiishtcpd.com/en/multimedia.html ಈ ಬಹು-ಮಾಧ್ಯಮ ವಿಷಯವು ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಲಭ್ಯವಿದೆ.
ಕೇಂದ್ರವು ಕೆಲವು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಅವು ಇಂತಿವೆ:
ಸ್ಪೀಚ್ ಸೌಂಡ್ ಎರರ್ ಥೆರಪಿ - ಮಲಯಾಳಂನಲ್ಲಿ (ASSET)
ಟಿನ್ನಿಟಸ್ ಅಪ್ಲಿಕೇಶನ್: ನಿಮ್ಮ ಗುಂಯ್ ಗುಡುವ ಕಿವಿಗಳನ್ನು ಪರಿಶೀಲಿಸಿ
ಟಿಸಿಪಿಡಿಯ ಕರಪತ್ರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಟಿಸಿಪಿಡಿಯ ಬುಕ್‌ಮಾರ್ಕ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ