ಶ್ರೇಷ್ಠತೆಯ ಕೇಂದ್ರ


ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಮಾನ್ಯ ಸಚಿವರು ಸಂವಹನ ನ್ಯೂನತೆ ಕ್ಷೇತ್ರದಲ್ಲಿ ಸಂಸ್ಥೆಯನ್ನು ಒಟ್ಟು ರೂ.137 ಕೋಟಿ ವೆಚ್ಚದಲ್ಲಿ (ಮೂಲಸೌಕರ್ಯ, ಸಿಬ್ಬಂದಿ ಮತ್ತು ಸಲಕರಣೆಗಳಿಗಾಗಿ) ಉತ್ಕೃಷ್ಠತೆಯ ಕೇಂದ್ರವಾಗಿ ಉನ್ನತೀಕರಿಸಲು 2013 ರ ಜುಲೈ, 18ರಂದು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದರು.
                                                
ಮುನ್ನುಡಿ:
ಮುನ್ನುಡಿ ಸಂವಹನ ನ್ಯೂನತೆ ಕ್ಷೇತ್ರದಲ್ಲಿ ವಿಶ್ವಮಟ್ಟದ ’ಶ್ರೇಷ್ಠ ಕೇಂದ್ರ’ ವಾಗಬೇಕೆಂಬ ಗುರಿಯೊಂದಿಗೆ ರೂಪುಗೊಂಡಿರುವ ಈ ಕೇಂದ್ರವು, ವಿವಿಧ ಕ್ಷೇತ್ರಗಳ ಶಿಕ್ಷಣ ತಜ್ಞರು, ಚಿಕಿತ್ಸಕರು, ತಂತ್ರಜ್ಞರು ಮತ್ತು ಸಂಶೋಧಕರನ್ನು ಒಳಗೊಂಡಿದೆ. ಸಂವಹನ ನ್ಯೂನತೆಗಳ ಬಗ್ಗೆ ಸಮಗ್ರ ಸಂಶೋಧನೆಯನ್ನು ಕೈಗೊಳ್ಳುವುದು, ಅತ್ಯಾಧುನಿಕ ಸೌಲಭ್ಯಗಳನ್ನು ಉಪಯೋಗಿಸಿ ಚಿಕಿತ್ಸಾ ಸೇವೆಗಳನ್ನು ಒದಗಿಸುವುದು, ಶಸ್ತ್ರಚಿಕಿತ್ಸೆ, ಹಾಗೂ ಸಹಾಯಕ ತಂತ್ರಜ್ಞಾನದ ಮೂಲಕ ಪುನರ್ವಸತಿ ಸೇವೆಗಳನ್ನು ನೀಡುವುದು ಕೇಂದ್ರದ ಪ್ರಮುಖ ಉದ್ದೇಶಗಳು. ಕೇಂದ್ರವು, ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ಜೀವನವನ್ನು ಸುಧಾರಿಸಲು ಮತ್ತು ಅವರಲ್ಲಿ ಅಗತ್ಯ ಅರಿವು ಮೂಡಿಸಿ ಸಬಲಗೊಳಿಸುವ ಸಲುವಾಗಿ ತರಬೇತಿ, ಸಂಶೋಧನೆ, ಚಿಕಿತ್ಸಾ ಸೇವೆಗಳು ಮತ್ತು ವಿಸ್ತರಣೆಗೆ ಸಂಬಂಧಿಸಿದಂತೆ ಸಾಕಷ್ಟು ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಕೇಂದ್ರವು ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳು ಮತ್ತು ಅವರ ಪೋಷಕರ ಸಹಕಾರದೊಂದಿಗೆ ಸಮಸ್ಯೆಗಳ ಕುರಿತು ಸಮಗ್ರ ತಿಳುವಳಿಕೆ ನೀಡಲು ಹಾಗೂ ಅಗತ್ಯ ಅರಿವು ಮೂಡಿಸಲು ಗಮನ ಕೇಂದ್ರೀಕರಿಸುತ್ತದೆ ಹಾಗೂ ಆ ಮೂಲಕ ಅವರ ತೊಂದರೆಗಳನ್ನು ಕಡಿಮೆ ಮಾಡುವೆಡೆ ಕಾರ್ಯ ನಿರ್ವಹಿಸುತ್ತದೆ.

ಉದ್ದೇಶಗಳು:

  • ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ತಪಾಸಣೆ ಹಾಗೂ ಪುನಃಶ್ಚೇತನಕ್ಕಾಗಿ ಅಗತ್ಯವಿರುವ ವೃತ್ತಿಪರರು ಮತ್ತು ಅದರ ಲಭ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು
  • ವಾಕ್-ದೋಷ ಹಾಗೂ ಇತರ ಸಂವಹನ ನ್ಯೂನತೆಯುಳ್ಳ ಭಾರತೀಯರಿಗೆ ಅನುಗುಣವಾಗಿ ಡೇಟಾಬೇಸ್, ಪರೀಕ್ಷೆಗಳು ಮತ್ತು ಮಾದರಿಗಳನ್ನು ರಚಿಸುವ ಸಲುವಾಗಿ ಸಂಶೋಧನೆಗಳನ್ನು ಕೈಗೊಳ್ಳುವುದು
  • ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳಿಗೆ ಚಿಕಿತ್ಸಾ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಸಾಮರ್ಥ್ಯಾಭಿವೃದ್ಧಿ
  • ಸಂವಹನ ನ್ಯೂನತೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ

ಮೂಲಸೌಕರ್ಯ:

ಶ್ರೇಷ್ಠತೆಯ ಕೇಂದ್ರ’ ವು ನಾಲ್ಕು ಮಹಡಿಗಳುಳ್ಳ ಕಟ್ಟಡದಲ್ಲಿದ್ದು, ಒಟ್ಟು 2,71,249 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಕಟ್ಟಡದಲ್ಲಿರುವ ಸಂಶೋಧನಾ ಕೇಂದ್ರ, ಚಿಕಿತ್ಸಾ ಕೇಂದ್ರ ಮತ್ತು ಬಾಹ್ಯಸೇವಾ ಕೇಂದ್ರಗಳು ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ರೋಗನಿರ್ಣಯ, ತಪಾಸಣೆ ಹಾಗೂ ಪುನಃಶ್ಚೇತನ ಸೇವೆಗಳನ್ನು ಒದಗಿಸಲು ಅತ್ಯಾಧುನಿಕ ಪ್ರಯೋಗಾಲಯಗಳು ಹಾಗೂ ಸೌಲಭ್ಯಗಳನ್ನು ಹೊಂದಿವೆ. ಐದು ಚಿಕಿತ್ಸಾ ಕೇಂದ್ರಗಳು

  • ಮಾತು ಹಾಗೂ ಭಾಷಾ ನ್ಯೂನತೆಯುಳ್ಳ ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರೀಕರಿಗಾಗಿ ಕೇಂದ್ರ
  • ಕಿವಿಮೊರೆತ ಹಾಗೂ ತಲೆಸುತ್ತುವಿಕೆಯ ನ್ಯೂನತೆಯುಳ್ಳ ವ್ಯಕ್ತಿಗಳಿಗಾಗಿ ಕೇಂದ್ರ
  • ಶ್ರವಣದೋಷವುಳ್ಳ ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರರಿಗಾಗಿ ಕೇಂದ್ರ
  • ನುಂಗುವ ಕ್ರಿಯೆಯಲ್ಲಿ ನ್ಯೂನತೆಯುಳ್ಳ ವ್ಯಕ್ತಿಗಳಿಗಾಗಿ ಕೇಂದ್ರ
  • ಸಂವಹನ ನ್ಯೂನತೆಗಳ ಶಸ್ತ್ರಚಿಕಿತ್ಸಾ ಪುನರ್ವಸತಿ ಕೇಂದ್ರ


ಸೌಲಭ್ಯಗಳು:

ಐದು ಸಂಶೋಧನಾ ಕೇಂದ್ರಗಳು

  • ಮಾತು-ಭಾಷಾ ವಿಜ್ಞಾನ ಕೇಂದ್ರ
  • ್ರವಣ ವಿಜ್ಞಾನ ಕೇಂದ್ರ
  • ಸಂವಹನ ನ್ಯೂನತೆಗಳ ತಡೆಗಟ್ಟುವಿಕೆ ಮತ್ತು ಸಾಂಕ್ರಾಮಿಕತೆಯ ಸಂಶೋಧನೆ ಮತ್ತು ಸಂವಹನ ನ್ಯೂನತೆಗಳ ಅರಿವಿನ ವರ್ತನೆಯ ವಿಜ್ಞಾನ ಕೇಂದ್ರ
  • ಪುನರ್ವಸತಿ ಎಂಜಿನಿಯರಿಂಗ್, ಅಕೌಸ್ಟಿಕ್ಸ್ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ಕೇಂದ್ರ (ಸಿಆರ್ ಎಬಿ) ಕೇಂದ್ರ
  • ಸಂವರ್ಧನ ಹಾಗೂ ಪರ್ಯಾಯ ಸಂವಹನ ಮತ್ತು ಸನ್ನೆ ಭಾಷೆಯ ಕೇಂದ್ರ

ಐದು ಚಿಕಿತ್ಸಾ ಕೇಂದ್ರಗಳು

  • ಮಾತು ಹಾಗೂ ಭಾಷಾ ನ್ಯೂನತೆಯುಳ್ಳ ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರೀಕರಿಗಾಗಿ ಕೇಂದ್ರ
  • ಕಿವಿಮೊರೆತ ಹಾಗೂ ತಲೆಸುತ್ತುವಿಕೆಯ ನ್ಯೂನತೆಯುಳ್ಳ ವ್ಯಕ್ತಿಗಳಿಗಾಗಿ ಕೇಂದ್ರ
  • ಶ್ರವಣದೋಷವುಳ್ಳ ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರರಿಗಾಗಿ ಕೇಂದ್ರ
  • ನುಂಗುವ ಕ್ರಿಯೆಯಲ್ಲಿ ನ್ಯೂನತೆಯುಳ್ಳ ವ್ಯಕ್ತಿಗಳಿಗಾಗಿ ಕೇಂದ್ರ
  • ಸಂವಹನ ನ್ಯೂನತೆಗಳ ಶಸ್ತ್ರಚಿಕಿತ್ಸಾ ಪುನರ್ವಸತಿ ಕೇಂದ್ರ

ಎರಡು ಬಾಹ್ಯಸೇವಾ ಕೇಂದ್ರಗಳು

  • ್ರಕಟಣೆ ವಿಭಾಗ/ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ
  • ಸಂವಹನ ನ್ಯೂನತೆಗಳ ಸಾರ್ವಜನಿಕ ಶಿಕ್ಷಣ ಕೇಂದ್ರ

ಪ್ರಮುಖ ಚಟುವಟಿಕೆಗಳು

ಪ್ರಮುಖ ಚಟುವಟಿಕೆಗಳು - ಸಂಶೋಧನೆ ಕೇಂದ್ರಗಳು

ಪ್ರಮುಖ ಚಟುವಟಿಕೆಗಳು - ಕ್ಲಿನಿಕಲ್ ಕೇಂದ್ರಗಳು

ಪ್ರಮುಖ ಚಟುವಟಿಕೆಗಳು - ಔಟ್ರೀಚ್ ಕೇಂದ್ರಗಳು