ಪ್ರಶಸ್ತಿಗಳು


 ಸಂಸ್ಥೆಯು ಸ್ಥಾಪಿಸಿರುವ ಪ್ರಶಸ್ತಿಗಳು

  • ಶ್ರೀ ಡಿ ಕೆ ವೆಂಕಟೇಶ್ ಮೂರ್ತಿ ಚಿನ್ನದ ಪದಕ ಇದು - ಇದು ಡಾ. ವಿಜಯ್ ವಿ. ಕುಮಾರ್, ಅನಿಲ್ ವಿ. ಕುಮಾರ್ ಮತ್ತು ಅವರ ಕುಟುಂಬದಿಂದ ಸ್ಥಾಪಿಸಲ್ಪಟ್ಟ ಪ್ರಶಸ್ತಿಯಾಗಿದ್ದು, ಬಿ.ಎಸ್.ಸಿ / ಬಿ..ಎಸ್.ಎಲ್.ಪಿ ಡಿಗ್ರಿಯಲ್ಲಿ ಮೊದಲ ಸ್ಥಾನ ಪಡೆದವರಿಗೆ ನೀಡಲಾಗುತ್ತದೆ

  • ಅತ್ಯುತ್ತಮ ಕ್ಲಿನಿಕಲ್ ಕಾನ್ಫರೆನ್ಸ್ ಪ್ರಸ್ತುತಿ ಪ್ರಶಸ್ತಿ- ಮೂರನೇ ಬಿ.ಎಸ್.ಸಿ / ಬಿ..ಎಸ್.ಎಲ್.ಪಿ ಪದವಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ

  • ಅಭಿಲಾಶ ಪ್ರಶಸ್ತಿ - ಎಂ.ಎಸ್.ಸಿ (ವಾಕ್-ಭಾಷಾ ದೋಷ) ಇದು ಶ್ರೀಮತಿ ಇಂದಿರಾ ಕುಮಾರಿ ಅವರು ಸ್ಥಾಪಿಸಿರುವ ಪ್ರಶಸ್ತಿ. ಅತ್ಯುತ್ತಮ ವಿದ್ಯಾರ್ಥಿ ಚಿಕಿತ್ಸಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದು ನಗದು ಬಹುಮಾನದ ರೂಪದಲ್ಲಿದೆ.

  • ಶ್ರೀಮತಿ ಜಯಲಕ್ಷ್ಮಿ ಚಿನ್ನದ ಪದಕ - ಡಾ. ವಿಜಯ್ ವಿ. ಕುಮಾರ್, ಅನಿಲ್ ವಿ. ಕುಮಾರ್ ಮತ್ತು ಅವರ ಕುಟುಂಬದವರು ಸ್ಥಾಪಿಸಿರುವ ಪ್ರಶಸ್ತಿಯಾಗಿದ್ದು, ಎಂಎಸ್ಸಿ (ವಾಕ್-ಭಾಷಾ ದೋಷ) ಯಲ್ಲಿ ಮೊದಲ ಸ್ಥಾನ ಪಡೆದವರಿಗೆ ನೀಡಲಾಗುತ್ತದೆ

  • ಫ್ರೆಂಡ್ಸ್ ಯುನೈಟೆಡ್ ಆರ್ಗನೈಸೇಶನ್ ಎಂಡೋಮೆಂಟ್ ಸ್ಕಾಲರ್ಶಿಪ್ -  ಎಂಎಸ್ಸಿ (ವಾಕ್-ಭಾಷಾ ದೋಷ) ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗೆ ನಗದು ಬಹುಮಾನ ನೀಡಲಾಗುತ್ತದೆ

  • ಅತ್ಯುತ್ತಮ ಜರ್ನಲ್ ಕ್ಲಬ್ ಪ್ರಸ್ತುತಿ ಪ್ರಶಸ್ತಿ-  ಪ್ರಥಮ ಎಂಎಸ್ಸಿ(ಶ್ರವಣವಿಜ್ಞಾನ/ ವಾಕ್-ಭಾಷಾ ದೋಷ) ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

  • ಶ್ರೀಮತಿ. ಟಿ.ವಿ. ಅಲಮೇಲು ಚಿನ್ನದ ಪದಕ-  ಎಂ.ಎಸ್ಸಿ. (ವಾಕ್-ಭಾಷಾ ದೋಷ) ಮಾತಿನ ಉಚ್ಚಾರಣೆ (ಸ್ಪೀಚ್ ಪ್ರೊಡಕ್ಷನ್) ಎಂಬ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದವರಿಗೆ ನೀಡಲಾಗುತ್ತದೆ.

  • ಡಾ. ಆರ್. ಸುಂದರ್ ಚಿನ್ನದ ಪದಕ- ಮಾತು-ಭಾಷಾ ಸಂಸ್ಕರಣೆ (ಸ್ಪೀಚ್-ಲ್ಯಾಂಗ್ವೇಜ್ ಪ್ರೊಸೆಸಿಂಗ್ )/ ಮಾತು ಭಾಷಾಗ್ರಹಿಕೆ (ಸ್ಪೀಚ್-ಲ್ಯಾಂಗ್ವೇಜ್ ಪೆರ್ಸೆಪ್ಷನ್)  ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದವರಿಗೆ (ಮಾತು - ಭಾಷೆ ಸಂಸ್ಕರಣೆ / ಎಂಎಸ್ಸಿ (ವಾಕ್-ಭಾಷಾ ದೋಷ) ನೀಡಲಾಗುತ್ತದೆ.

  • ಡಾ. ವಿಜಯಲಕ್ಷ್ಮಿ ಬಸವರಾಜ್ ಚಿನ್ನದ ಪದಕ ಶ್ರವಣ ವಿಜ್ಞಾನದ ಸ್ನಾತಕೋತ್ತರ ಪದವಿಯ ಎಲ್ಲ ಸೆಮಿಸ್ಟರ್ ಗಳಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಈ ಪ್ರಶಸ್ತಿ ನೀಡಲಾಗುತ್ತದೆ.

  • ಶ್ರೀಮತಿ. ಆರ್. ಸುಮಿತ್ರಮ್ಮ ಮತ್ತು ಶ್ರೀ ಆರ್.ಕೆ. ರಾಜಗೋಪಾಲ ಚಿನ್ನದ ಪದಕ ಎಂ.ಎಸ್ಸಿ (ಆಡಿಯಾಲಜಿ) ಸೆಮಿಸ್ಟರ್ ಗಳಲ್ಲಿ ಪ್ರಾಯೋಗಿಕ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದವರಿಗೆ  ನೀಡಲಾಗುತ್ತದೆ.

ಮೈಸೂರು ವಿಶ್ವವಿದ್ಯಾನಿಲಯದ ಸಮಾವೇಶದಲ್ಲಿ ನೀಡುವ ಚಿನ್ನದ ಪದಕಗಳು:

  • ಡಾ. ನಟೇಶ್, ರತ್ನ ಚಿನ್ನದ ಪದಕಬಿಎಎಸ್ಎಲ್ಪಿ ಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗೆ ಪದಕ ನೀಡಲಾಗುತ್ತದೆ.

  • ಶ್ರವಣ ವಿಜ್ಞಾನದಲ್ಲಿ ರಾಷ್ಟ್ರೀಯ ಶ್ರವಣ ಸಂರಕ್ಷಣೆ ಚಿನ್ನದ ಪದಕ ಇದು ರಾಷ್ಟ್ರೀಯ ಶ್ರವಣ ರಕ್ಷಣಾ ಸಂಘದ (ನ್ಯಾಷನಲ್ ಹಿಯರಿಂಗ್ ಕೇರ್) ವತಿಯಿಂದ ಸ್ಥಾಪಿತಗೊಂಡಿರುವ ಪ್ರಶಸ್ತಿಯಾಗಿದ್ದು ಬಿ.ಎಸ್.ಸಿ (SP & HG)/ಬಿ..ಎಸ್.ಎಲ್.ಪಿ ಪದವಿಯಲ್ಲಿ ಶ್ರವಣವಿಜ್ಞಾನ ಆಧಾರಿತ ವಿಷಯಗಳಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

  • ಶ್ರೀ ಮನೋಹರ್ ಚಿನ್ನದ ಪದಕಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ ಮಾತು-ಭಾಷಾ ದೋಷ ವಿಭಾಗದಲ್ಲಿ ಬೋಧಕರಾಗಿದ್ದ ದಿವಂಗತ ಮನೋಹರ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿ - ಎಂಎಸ್ಸಿ (ಮಾತು-ಭಾಷಾ ದೋಷ)ಯಲ್ಲಿ ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ ನೀಡಲಾಗುತ್ತದೆ.

ಆರತಿ ವೆಂಕಟರಾಮನ್ ಚಿನ್ನದ ಪದಕ - ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ದಿವಂಗತ ಶ್ರೀಮತಿ ಆರತಿ ವೆಂಕಟರಾಮನ್ ಅವರ ನೆನಪಿಗಾಗಿ ಸ್ಥಾಪಿಸಲಾಗಿರುವ ಪ್ರಶಸ್ತಿಯನ್ನು ಎಂಎಸ್ಸಿ (ಶ್ರವಣವಿಜ್ಞಾನ)ಯಲ್ಲಿ ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ ನೀಡಲಾಗುತ್ತದೆ