ನುಂಗುವ ಕ್ರಿಯೆಯಲ್ಲಿನ ನ್ಯೂನತೆಗಳ ಚಿಕಿತ್ಸಾ ಕೇಂದ್ರ


  • ಮನೆ
  • ನುಂಗುವ ಕ್ರಿಯೆಯಲ್ಲಿನ ನ್ಯೂನತೆಗಳ ಚಿಕಿತ್ಸಾ ಕೇಂದ್ರ

CSD ಕುರಿತು:

ನುಂಗುವ ಕ್ರಿಯೆಯಲ್ಲಿನ  ನ್ಯೂನತೆಗಳ ಚಿಕಿತ್ಸಾ ಕೇಂದ್ರ

ನುಂಗುವಿಕೆಯ ಅಸ್ವಸ್ಥತೆಗಳನ್ನು 'ಡಿಸ್ಫೇಜಿಯಾ' ಎಂದೂ ಕರೆಯುತ್ತಾರೆ. ಇದು ಸುರಕ್ಷಿತ, ಪರಿಣಾಮಕಾರಿ ಮತ್ತು ಆನಂದದಾಯಕ ಆಹಾರ, ಪಾನೀಯ ಸೇವನೆಯನ್ನು  ಅಡ್ಡಿಪಡಿಸುವ ಸ್ಥಿತಿಯಾಗಿದೆ. ಇದು ರಚನಾತ್ಮಕ, ನರ, ಸ್ನಾಯುಗಳ ಕಾರ್ಯ ಮತ್ತು ನಿಯಂತ್ರಣದಲ್ಲಿನ ಸಮಸ್ಯೆಗಳಿಂದ ಉಂಟಾಗುವುದು. ಇದು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಅಸ್ವಸ್ಥತೆಗಳ ಲಕ್ಷಣವಾಗಿ ಸಂಭವಿಸಬಹುದು (ಉದಾಹರಣೆಗೆ: ಸೀಳು ಅಂಗುಳ, ಬಲ್ಬಾರ್ ಪಾರ್ಶ್ವವಾಯು) ಅಥವಾ ಇನ್ನೊಂದು ವೈದ್ಯಕೀಯ ಸ್ಥಿತಿಯ ಚಿಕಿತ್ಸೆಯ ಪರಿಣಾಮವಾಗಿಯೂ ಇರಬಹುದು (ಉದಾಹರಣೆಗೆ: ತಲೆ ಮತ್ತು ಕುತ್ತಿಗೆ ಕ್ಯಾನ್ಸರ್, ಪಾರ್ಶ್ವವಾಯು ಇತ್ಯಾದಿ). ಮಕ್ಕಳಲ್ಲಿ ಸಂವೇದನಾತ್ಮಕ, ಚಲನಾತ್ಮಕ, ಬೆಳವಣಿಗೆಯ ಅಥವಾ ವರ್ತನಾ ಸಂಬಂಧಿತ ಸಮಸ್ಯೆಗಳ ಕಾರಣದಿಂದ ಆಹಾರ ಸೇವನೆ ಮತ್ತು ನುಂಗುವ ಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಆಹಾರ ಸೇವನೆ ಮತ್ತು ನುಂಗುವ ಕ್ರಿಯೆಯಲ್ಲಿ ತೊಂದರೆ ಇರುವ ವ್ಯಕ್ತಿಗಳು ಕೆಳಗಿನ ಕೆಲವು ಲಕ್ಷಣಗಳನ್ನು ತೋರಿಸಬಹುದು:

1. ತಿನ್ನುವಾಗ ಅಥವಾ ಕುಡಿಯುವಾಗ ಕೆಮ್ಮು ಬರುವುದು

2. ನಿಧಾನವಾಗಿ ತಿನ್ನುವುದು/ ಊಟ ಮುಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದು

3. ಕೆಲವು  ರೀತಿಯ ಆಹಾರವನ್ನು(ಉದಾಹರಣೆಗೆ: ಬ್ರೆಡ್, ಒಣ ದ್ರಾಕ್ಷಿ ಅಥವಾ ಗೋಡಂಬಿ)ತಿನ್ನಲು ಸಾಧ್ಯವಾಗದಿರುವುದು

4. ನುಂಗಿದ ನಂತರ ಆಹಾರ ಬಾಯಿಯಲ್ಲಿ ಉಳಿಯುವುದು

5. ಆಹಾರ/ನೀರು ತುಟಿಗಳಿಂದ ಆಚೆ ಬರುವುದು

6. ತಿನ್ನುವಾಗ/ಕುಡಿಯುವಾಗ ಅಥವಾ ಊಟ ಮುಗಿಸದ ನಂತರ ಉಸಿರಾಟದಲ್ಲಿ ತೊಂದರೆ

7. ತಿಂದ ಅಥವಾ ಕುಡಿದ ನಂತರ  ಧ್ವನಿಯಲ್ಲಿ ಬದಲಾವಣೆ

8. ಆಹಾರವು ಹಲವಾರು ಬಾರಿ ನುಂಗಿದ ನಂತರವೂ ಗಂಟಲಿನಲ್ಲಿಯೇ ಇರುವಂತೆ ಭಾಸವಾಗುವುದು

ಮೈಸೂರಿನ  ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿರುವ ನುಂಗುವ ಕ್ರಿಯೆಯಲ್ಲಿನ ನ್ಯೂನತೆಗಳ ಚಿಕಿತ್ಸಾ ಕೇಂದ್ರವು, ಮಕ್ಕಳು ಮತ್ತು ವಯಸ್ಕರಲ್ಲಿ ಆಹಾರ ಸೇವನೆ ಮತ್ತು ನುಂಗುವ ಕ್ರಿಯೆಯಲ್ಲಿ ತೊಂದರೆಯನ್ನು  ಗುರುತಿಸುವುದು, ಪರೀಕ್ಷೆ ಮಾಡುವುದು ಮತ್ತು ಅದಕ್ಕೆ ಚಿಕಿತ್ಸೆ ಕೊಡುವುದರಲ್ಲಿ  ತೊಡಗಿಸಿಕೊಂಡಿದೆ. ಆಹಾರ ನುಂಗುವ ಅಸ್ವಸ್ಥತೆಗಳಿರುವ ವ್ಯಕ್ತಿಗಳಿಗೆ ಸೇವೆ ಸಲ್ಲಿಸಲು ನಮ್ಮಲ್ಲಿ ಅತ್ಯುತ್ತಮ ತಜ್ಞರ ತಂಡ, ಮೂಲಸೌಕರ್ಯ, ಮತ್ತು ಸೌಲಭ್ಯಗಳಿವೆ. 

 

ನಮ್ಮ ಧ್ಯೇಯ ಮತ್ತು ಉದ್ದೇಶ:

ನುಂಗುವ ಅಸ್ವಸ್ಥತೆಗಳಿರುವ ವ್ಯಕ್ತಿಗಳ ವೈದ್ಯಕೀಯ ಆರೈಕೆಯಲ್ಲಿ ಶ್ರೇಷ್ಠತೆಗಾಗಿ ಶ್ರಮಿಸುವುದು ನಮ್ಮ ಧ್ಯೇಯ.

ನುಂಗುವಿಕೆ  ಅಸ್ವಸ್ಥತೆಗಳಿರುವ ವ್ಯಕ್ತಿಗಳ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ, ಉತ್ತಮ ಅರ್ಹತೆಯುಳ್ಳ ವಾಕ್-ಭಾಷಾ ಚಿಕಿತ್ಸಕರಿಂದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಯಾವುದೇ ರಾಜಿ ಇಲ್ಲದ ಗುಣಮಟ್ಟದ ಕ್ಲಿನಿಕಲ್ ಸೇವೆಗಳನ್ನು ಒದಗಿಸುವುದು ಹಾಗೂ ಕ್ರಮಬದ್ಧ ಮತ್ತು ಉನ್ನತ ಪ್ರಭಾವ ಬೀರುವ ಸಂಶೋಧನಾ ಫಲಿತಾಂಶಗಳ ಮೂಲಕ ಕ್ಲಿನಿಕಲ್ ಕ್ಷೇತ್ರಕ್ಕೆ ಕೊಡುಗೆ ನೀಡುವುದೇ ನಮ್ಮ ಉದ್ದೇಶವಾಗಿದೆ.

ಇಂದಿನವರೆಗಿನ ನಮ್ಮ  ವೇಳಾಪಟ್ಟಿ

ಕಳೆದ ಒಂದು ವರ್ಷದಿಂದ, ನಾವು ಇಷ್ಟು  ವ್ಯಕ್ತಿಗಳಲ್ಲಿ  ಬದಲಾವಣೆ ತರಲು ಸಾಧ್ಯವಾಯಿತು

 

 

 

 

 

ಕ್ಲಿನಿಕಲ್ ಸೌಲಭ್ಯಗಳು

ಸಮಗ್ರ ನುಂಗುವಿಕೆಯ ಪರೀಕ್ಷೆ  
•ಕ್ಲಿನಿಕಲ್ ಸ್ವಾಲೋಯಿಂಗ್ ಪರೀಕ್ಷೆ  
•ಫ್ಲೆಕ್ಸಿಬಲ್ ಎಂಡೋಸ್ಕೊಪಿಕ್ ಇವಾಲ್ಯೂಯೇಷನ್ ಆಫ್ ಸ್ವಾಲೋಯಿಂಗ್ 
•ಹೈ-ರೆಸಲ್ಯೂಶನ್ ಮಾನೋಮೆಟ್ರಿ
•ಸರ್ಫೇಸ್ ಎಲೆಕ್ಟ್ರೋಮಯೋಗ್ರಫಿ
•ಡ್ರೈ ಸ್ಪೈರೋಮೆಟ್ರಿ

ನುಂಗುವಿಕೆ ಪುನರ್ವಸತಿ ಕಾರ್ಯಕ್ರಮಗಳು
•ವ್ಯಕ್ತಿಗತ ಚಿಕಿತ್ಸಾ ಕಾರ್ಯಕ್ರಮಗಳು
•ಸಂವೇದನಾತ್ಮಕ–ಚಲನಾತ್ಮಕ ವ್ಯಾಯಾಮ ಆಧಾರಿತ ಪುನರ್ವಸತಿ
•ಉಸಿರಾಟ ಬಲಪಡಿಸುವ ಸಾಧನಗಳು
•ನ್ಯೂರೋ-ಮಸ್ಕ್ಯುಲಾರ್ ಎಲೆಕ್ಟ್ರಿಕಲ್ ಸ್ಟಿಮ್ಯುಲೇಷನ್ 
•ಬಾಯಿಯ ಸ್ನಾಯುಗಳನ್ನು ಬಲಪಡಿಸುವ ಸಾಧನಗಳು
•ಹೊಂದಾಣಿಕೆಯ ಆಹಾರ ಚಿಕಿತ್ಸಾ ಸಾಧನಗಳು

ಸಂಪನ್ಮೂಲಗಳು ಮತ್ತು ಮೂಲಸೌಕರ್ಯ

1. ಮೌಲ್ಯಮಾಪನ ಕೊಠಡಿಗಳು: 6 ಸಂಖ್ಯೆ
2. ಚಿಕಿತ್ಸಾ ಕೊಠಡಿಗಳು: 6 ಸಂಖ್ಯೆ
3. ಪ್ರಯೋಗಾಲಯಗಳು: 3 ಸಂಖ್ಯೆ
4. ಸಮಾಲೋಚಕ ಕೊಠಡಿಗಳು: 2
5. ಅಧ್ಯಾಪಕರ ಕೊಠಡಿಗಳು: 4
6. ಸಭೆಯ ಸಭಾಂಗಣ
7. ಕಛೇರಿ

ಫ್ಯಾಕಲ್ಟಿ ಸದಸ್ಯರು / ಸಿಬ್ಬಂದಿ

ಫೋಟೋ ಹೆಸರು
ಡಾ. ಎನ್. ಸ್ವಪ್ನಾ
ವಾಕ್ ರೋಗಶಾಸ್ತ್ರದ ಪ್ರಾಧ್ಯಾಪಕರು ಸಂಯೋಜಕರು - CSD
Ph Off : 0821-250-2831
Email: swapna@aiishmysore.in

ಚಟುವಟಿಕೆಗಳು

ಚಟುವಟಿಕೆಗಳು

ಫೋಟೋ ಗ್ಯಾಲರಿ

ಮೈಸೂರಿನ AIISH ನಲ್ಲಿ 11 ಮತ್ತು 12ನೇ ಡಿಸೆಂಬರ್ 2024 ರಂದು ನಡೆದ ಆಹಾರ ಮತ್ತು ನುಂಗುವ ಚಿಕಿತ್ಸೆಯ ರಾಷ್ಟ್ರೀಯ ಸಮ್ಮೇಳನ (AIISH-FeaST).

  

  

  

  

 

ಮೈಸೂರಿನ AIISH ನಲ್ಲಿ ಮಾರ್ಚ್ 21 ಮತ್ತು 22, 2024 ರಂದು ನಡೆದ ಯಶಸ್ವಿ ಆಹಾರ ಸೇವನೆ ಮತ್ತು ನುಂಗುವಿಕೆ ಬಗ್ಗೆ ಅಡಿಪಾಯ ಹಾಕುವುದು: ಜನನದಿಂದ 2 ವರ್ಷಗಳುಎಂಬ ರಾಷ್ಟ್ರೀಯ ವಿಚಾರ ಸಂಕಿರಣ.

     

 

  

 

  

ಎರಡನೇ ಎಂಎಸ್ಸಿ ಎಸ್‌ಎಲ್‌ಪಿ (II MSc, SLP) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಸರಣಿ

  

  

     

  

 

ಅಲ್ಪಾವಧಿಯ ತರಬೇತಿ ಕಾರ್ಯಕ್ರಮ

AIISH ಅಲ್ಪಾವಧಿಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ

  • ಫ್ಲೆಕ್ಸಿಬಲ್ ಎಂಡೋಸ್ಕೊಪಿಕ್ ಇವಾಲ್ಯೂಯೇಷನ್ ಆಫ್ ಸ್ವಾಲೋಯಿಂಗ್ (FEES): ನುಂಗುವ ಅಸ್ವಸ್ಥತೆಯ ಮೌಲ್ಯಮಾಪನದ ಕಾರ್ಯವಿಧಾನ ಮತ್ತು ಅನ್ವಯಿಕೆ

ನುಂಗುವ ಅಸ್ವಸ್ಥತೆಯ ನಿರ್ವಹಣೆಯಲ್ಲಿ ನ್ಯೂರೋ-ಮಸ್ಕ್ಯುಲಾರ್ ಎಲೆಕ್ಟ್ರಿಕಲ್ ಸ್ಟಿಮ್ಯುಲೇಷನ್

ಸಾರ್ವಜನಿಕ ಶಿಕ್ಷಣ

ಸಾರ್ವಜನಿಕ ಶಿಕ್ಷಣ

ಕಾರ್ಯಕ್ರಮಗಳು ನಡೆದ ದಿನ ಪಟ್ಟಿ

ನುಂಗುವಿಕೆಯ ಜಾಗೃತಿ ತಿಂಗಳು-2025

ನುಂಗುವಿಕೆಯ ಅಸ್ವಸ್ಥತೆಗಳನ್ನು ಮೊದಲೇ ಗುರುತಿಸುವುದು ಮತ್ತು ತಪಾಸಣೆ ಮಾಡುವ ಬಗ್ಗೆ ಅಲೈಡ್ ಹೆಲ್ತ್ ಪ್ರೊಫೆಷನಲ್ಸ್ (ನರ್ಸಿಂಗ್ ವಿದ್ಯಾರ್ಥಿಗಳು) ಗಾಗಿ ಮಾರ್ಗದರ್ಶನ ಕಾರ್ಯಕ್ರಮ

ಆಹ್ವಾನಿತ ಭಾಷಣಗಳು: ಮಕ್ಕಳ ಆಹಾರ ಸೇವನೆಯ ಅಸ್ವಸ್ಥತೆಗಳಿಗೆ SOS ವಿಧಾನ: ಪ್ರಕರಣ ಅಧ್ಯಯನಗಳು

 

 

ಡಿಸ್ಫೇಜಿಯಾ ಜಾಗೃತಿ ತಿಂಗಳು -2024

ನಿರೀಕ್ಷಿತ ತಾಯಂದಿರಿಗೆ  ಜಾಗೃತಿ ಕಾರ್ಯಕ್ರಮ

ವಿಷಯ: ನವಜಾತ ಶಿಶುಗಳಲ್ಲಿ ಆಹಾರ ಸೇವನೆಯ ಮೈಲಿಗಲ್ಲುಗಳು ಮತ್ತು ಸಮಸ್ಯೆಗಳು

WhatsApp Image 2025-06-24 at 11.36.53 AM

 

ಹಿರಿಯ ನಾಗರಿಕರಿಗೆ ಮಾರ್ಗದರ್ಶನ ಕಾರ್ಯಕ್ರಮ

ವಿಷಯ: ಹಿರಿಯ ನಾಗರೀಕರಲ್ಲಿ ನುಂಗುವ ಸಮಸ್ಯೆಗಳು
 

Screenshot 2025-06-24 113458

POCD ವಿಭಾಗದ ಸಹಯೋಗದೊಂದಿಗೆ ನುಂಗುವಿಕೆಯ ಅಸ್ವಸ್ಥತೆಗಳ ಪರೀಕ್ಷೆಗೆ ಒಳಗಾದ ರೋಗಿಗಳಿಗೆ ನಿರ್ವಹಣಾ ಮಾರ್ಗಸೂಚಿಗಳನ್ನು ಒದಗಿಸುವುದು.

Screenshot 2025-06-24 113834

 

ಮಕ್ಕಳ ಆಹಾರ ಸೇವನೆಯ ಅಸ್ವಸ್ಥತೆಗಳ ಜಾಗೃತಿ ಮಾಸ-2025

DCS, ಸಂಪನ್ಮೂಲ ವಿನಿಮಯ ಮತ್ತು ಶಿಕ್ಷಣದ ಮೂಲಕ ಆರೈಕೆ ಮತ್ತು ಭರವಸೆ (REECH) ಕಾರ್ಯಕ್ರಮದ ಸಹಯೋಗದೊಂದಿಗೆ

ವಿಷಯ: ಮಕ್ಕಳ ಆಹಾರ ಸೇವನೆಯ ಅಸ್ವಸ್ಥತೆ: ಕ್ಲಿನಿಕಲ್ ಗುಣಲಕ್ಷಣಗಳು, AIISH ನಲ್ಲಿ ಲಭ್ಯವಿರುವ ಮೌಲ್ಯಮಾಪನ ಮತ್ತು ನಿರ್ವಹಣಾ ಸೌಲಭ್ಯ.

WhatsApp Image 2025-05-26 at 11.17.49 AM

WhatsApp Image 2025-05-26 at 11.35.31 AM

ಆಹ್ವಾನಿತ ಭಾಷಣ:

ಭಾರತೀಯ ಮಕ್ಕಳ ವೈದ್ಯರ ಸಂಘದ ಸಹಯೋಗದೊಂದಿಗೆ

ವಿಷಯ: ನರ ಬೆಳವಣಿಗೆಯ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಸಮಗ್ರ ಮಕ್ಕಳ ಆರೈಕೆ"

WhatsApp Image 2025-05-13 at 5.26.30 PM

ತಪಾಸಣೆ ಕಾರ್ಯಕ್ರಮ:

AIISH ಪಿಪಿಇಪಿ ಮಕ್ಕಳಿಗೆ ಮಕ್ಕಳ ಆಹಾರ ಸೇವನೆಯ ಅಸ್ವಸ್ಥತೆಗಾಗಿ ತಪಾಸಣೆ

WhatsApp Image 2025-05-26 at 11.22.20 AM

 

ಸಂಶೋಧನಾ ಪ್ರಬಂಧಗಳು

ಜರ್ನಲ್‌ಗಳಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧಗಳು

SL. No

Name of the Author (s)

Title of the paper

Name of the Journal

Year

Doi

1

Kavya V & Swapna N

Effect of functional chewing training via tele mode in children with cerebral palsy: A preliminary study

International Journal of Childhood and Development Disorder

2024

-

2

Sahana S & Swapna N

Effect of Be clear treatment on intelligibility in adults with post stroke dysarthria: Acoustic and Perceptual consequences

Communication Disorders Quartely Journal

2024

DOI:10.1177/15257401241265272

 

3

Sivaranjani, P., N.Swapna & T.K.Prakash

Investigation of Pharyngeal Swallow function of Healthy Older adults using Visual Analysis of Swallow Efficiency.

Indian Journal of otolaryngology and Head & Neck Surgery

2024

DOI:10.1007/s12070-024-05030-x

 

4

Priyanka, N., Chandran, S., & Swapna, N

Exploring the Feeding Practices in Neurotypical Children in Karnataka: A Preliminary Survey.

Journal of Indian Speech Language & Hearing Association

2024

-

5

Krishnan, G., Swapna, N., Prakash, T. K., Chandran, S., Chandrashekariah, B., &Sivaranjani, P.

Reliability of Scoring Penetration-aspiration from Endoscopic Evaluation of Swallowing by Novel and Experienced Clinicians.

Journal of Indian Speech Language & Hearing Association

2024

DOI: 10.4103/jisha.jisha_45_24

 

6

Bebayal, F. G., Joanna, K. B., Kusuma, M., Swapna, N., Kumaresan, D., Priyanka, N., & Chandran, S.

Investigation of Feeding Skills in Children with Neurodevelopmental Disorders: A Retrospective Study.

Journal of Indian Speech Language & Hearing Association

2024

Doi.org/10.1007/s12070-023-03846-7

7

Krishnan G, Kumaresan D, Vasanthalakshmi MS.

A systematic review of effect of neuromuscular electrical stimulation on physiological measures of swallow.

Journal of Indian Speech Language & Hearing Association

 

2024

 

8.

Mahendiran, Dheephiga, S. P. Goswami, Gayathri Krishnan, and Thiraviam Vanitha

An exploratory study on the prevalence of dysphagia and malnutrition risk among older residents in care homes

Journal of Food Science and Technology 

2025

 

9.

Sahana Srinivasan & Swapna N

Impact of Be Clear Treatment on Speech and Functional Communication Outcomes in Adults with Post-Stroke Dysarthria

International Journal of Health Sciences and Research

2025

https://doi.org/10.52403/ijhsr.20250106

10

M. Shalini &N. Swapna

The Chewing Challenge: Linking Oral Motor and Oral Sensory Skills to Feeding Difficulties in Autism

Journal of Indian Speech Language & Hearing Association

2025 https://doi.org/10.4103/jisha.jisha_5_25

ಪಡೆದ ಪ್ರಶಸ್ತಿಗಳು

Best Research Paper Awards received

Name of the faculty

Event

Paper topic

Gayathri Krishnan, Darshita Kumaresan, Vasanthalakshmi MS.

Best paper presentation  at National Conference on Feeding and swallowing therapy (AIISH-FeaST), AIISH, Mysuru. 11th and 12th Dec 2024.

 

 

A systematic review of effect of neuromuscular electrical stimulation on physiological measures of swallow

Joanna K B, Darshita Kumaresan, Getcy Bebayal F and Swapna N

Best Poster presentation at National Conference on Feeding and swallowing therapy (AIISH-FeaST), AIISH, Mysuru. 11th and 12th Dec 2024.

Immediate effect on spoon feeding skill using an Enhanced textural input of spoon in children with cerebral palsy: An exploratory study

 

Shalini, M., & Swapna, N

Best Oral presentation at National Conference on Feeding and swallowing therapy (AIISH-FeaST), AIISH, Mysuru. 11th and 12th Dec 2024.

The Chewing Challenge: Linking Oral Motor and Oral Sensory Skills to Feeding Difficulties in Autism

 

 

 

ನಮ್ಮ ಸಹಾಯ ಬೇಕೇ?

ನಿಮಗೆ ನಮ್ಮ ಸಹಾಯ ಬೇಕೇ? ದಯವಿಟ್ಟು ತೊಂದರೆ-ಮುಕ್ತ ಸಮಾಲೋಚನೆಗಾಗಿ ವಿಧಾನವನ್ನು ಅನುಸರಿಸಿ.