ವಿಶೇಷ ಶಿಕ್ಷಣ


ಪ್ರಸ್ತಾವನೆ

ವಿಶೇಷ ಶಿಕ್ಷಣ ವಿಭಾಗವನ್ನು ಅಖಿಲ ಭಾರತ ವಾಕ್‌-ಶ್ರವಣ ಸಂಸ್ಥೆಯಲ್ಲಿ 2005 ಏಪ್ರಿಲ್ ನಲ್ಲಿ ಪ್ರಾರಂಭಿಸಲಾಯಿತು. ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಇದುವರೆಗೆ ಆಗಿರುವ ಪ್ರಗತಿಯಿಂದಾಗಿ ವಿಭಾಗವು ಅತ್ಯುತ್ತಮವಾದ ಶೈಕ್ಷಣಿಕ ಸೇವೆಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನೀಡುವುದನ್ನು ಸಾಧ್ಯವಾಗಿಸಿದೆ. ಇಲ್ಲಿನ ಸಿಬ್ಬಂದಿಯು ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಡಿಪ್ಲೊಮಾ, ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಸೇರಿದಂತೆ ಸಾಂಸ್ಥಿಕ ಮತ್ತು ಸಹಯೋಗದ ಸಂಶೋಧನೆಗಳನ್ನು ನಡೆಸುವುದು, ವಿಶೇಷ ಅಗತ್ಯವಿರುವ ಮಕ್ಕಳಿಗೆ ವಿಶೇಷ ಶೈಕ್ಷಣಿಕ ಸೇವೆಗಳನ್ನು ನೀಡುವುದು, ಆರೈಕೆದಾರರು/ ಪೋಷಕರಿಗೆ ಮಾರ್ಗದರ್ಶನ ಮತ್ತು ಸಮಾಲೋಚನೆ ಒದಗಿಸುವುದು, ಹಾಗೂ ವೃತ್ತಿಪರರಿಗ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಪ್ರಸಾರ ಮಾಡುವುದರ ಜೊತೆ-ಜೊತೆಗೆ ಪೋಷಕರು ಹಾಗೂ ಆರೈಕೆದಾರರಲ್ಲಿ ಅರಿವು ಮೂಡಿಸುತ್ತಾರೆ.

ಧ್ಯೇಯಗಳು ಮತ್ತು ಉದ್ದೇಶಗಳು

ವಿಶೇಷ ಶಿಕ್ಷಣ ವಿಭಾಗವು, ಸಂವಹನ ನ್ಯೂನತೆಯುಳ್ಳ ಮಕ್ಕಳನ್ನು ಸಮನ್ವಯ ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ತರುವ ಮುಖ್ಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಿಭಾಗವು ಈ ಮೂಲ ಗುರಿಯನ್ನು ಸಾಧಿಸಲು ಕೆಳಗಿನ ಉದ್ದೇಶಗಳನ್ನು ಹೊಂದಿದೆ:

•    ಸಂವಹನ ನ್ಯೂನತೆಯುಳ್ಳ ಮಕ್ಕಳ ವಿಶೇಷ ಶಿಕ್ಷಣಕ್ಕಾಗಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸುವುದು.
•    ಸಂವಹನ ನ್ಯೂನತೆಯುಳ್ಳ ಮಕ್ಕಳಿಗೆ ಗುಣಮಟ್ಟದ ವಿಶೇಷ ಶಿಕ್ಷಣವನ್ನು ಒದಗಿಸುವುದು.
•    ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹಾಗೂ 
•    ವಿಶೇಷ ಶಿಕ್ಷಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶಾದ್ಯಂತ ಸಂವೇದನಾ ಕಾರ್ಯಕ್ರಮಗಳು, ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವುದು
 

ಫ್ಯಾಕಲ್ಟಿ ಸದಸ್ಯರು / ಸಿಬ್ಬಂದಿ

ಫೋಟೋ ಹೆಸರು
ಡಾ|| ಪ್ರೀತಿ ವೆಂಕಟೇಶ್
ಅಸೋಸಿಯೇಟ್ ಪ್ರೊಫೆಸರ್ ಮತ್ತು ಮುಖ್ಯಸ್ಥರು - ವಿಶೇಷ ಶಿಕ್ಷಣ ವಿಭಾಗ
Ph Off : 2502570
Email: prithivenkatesh@aiishmysore.in
ಡಾ|| ಅಲೋಕ್ ಕುಮಾರ್ ಉಪಾಧ್ಯಾಯ್
ಅಸೋಸಿಯೇಟ್ ಪ್ರೊಫೆಸರ್ (ವಿಶೇಷ ಶಿಕ್ಷಣ)
Ph Off : 2502568
Email: alokupadhyay@aiishmysore.in
ಶ್ರೀಮತಿ ಪಿ.ವಿ. ರಮಣಕುಮಾರಿ
ವಿಶೇಷ ಶಿಕ್ಷಕಿ
Ph Off : 2519
Email: pvramanakumari@aiishmysore.in
ಶ್ರೀಮತಿ ಸುಮನಾ ಎಚ್.ಪಿ.
ವಿಶೇಷ ಶಿಕ್ಷಕಿ
Ph Off : 0821 2502569
Email: sumanahp@aiishmysore.in
ಕುಮುದಾ ಆರ್.
ವಿಶೇಷ ಶಿಕ್ಷಕಿ
Ph Off : 0821 2502569
Email: kumudhaprakash@gmail.com
ಶ್ರೀಮತಿ ಕೆ.ಅಂಜನಾ
ವಿಶೇಷ ಶಿಕ್ಷಕಿ
Ph Off : 0821 2502569
Email: anjana691@gmail.com
ಶ್ರೀಮತಿ ಎಸ್.ವಿಜಯಲಕ್ಷ್ಮಿ
ವಿಶೇಷ ಶಿಕ್ಷಕಿ
Ph Off : 0821 2502569
Email: vinichampa@gmail.com
ಡಾ.ಕಾದಂಬರಿ ನಾನಿವಾಡೇಕರ್
ವಿಶೇಷ ಶಿಕ್ಷಕಿ
Ph Off : 0821 2502567
Email: kadambari@aiishmysore.in
ಶ್ರೀವಿದ್ಯಾ ಎಂ.ಎಸ್.
ವಿಶೇಷ ಶಿಕ್ಷಕಿ
Ph Off : 0821 2502569
Email: sree.sreevidya.sree@gmail.com
ಶ್ರೀಮತಿ ಶೋಭಾ ಬಿ.ಎನ್.
ವಿಶೇಷ ಶಿಕ್ಷಕಿ
Ph Off : 2502569
Email: shosujanasss2004@yahoo.co.in
ಶ್ರೀ ರಾಜ್ ಕುಮಾರ್ ಆರ್.
ವಿಶೇಷ ಶಿಕ್ಷಕ
Ph Off : 2502569
Email: rajkumar_rim@yahoo.co.in
ಶ್ರೀ ಬಾಲು ಎಂ.
ವಿಶೇಷ ಶಿಕ್ಷಕ
Ph Off : 2502569
Email: baluaiish18@gmail.com
ಶ್ರೀಮತಿ ಲಕ್ಷ್ಮಿ. ಎಸ್
ವಿಶೇಷ ಶಿಕ್ಷಕಿ
Ph Off : 2502569
Email: lakshmisharan@gmail.com
ಶ್ರೀ ಸಂದೇಶ.ಎಸ್.ಸಿ.
ಸಹಾಯಕ ಗ್ರೇಡ್ III
Ph Off : 2502566
Email: sandeshaiish@gmail.com

 

ಚಟುವಟಿಕೆಗಳು

. ಮಾನವ ಸಂಪನ್ಮೂಲ ಅಭಿವೃದ್ಧಿ

 ವಿಭಾಗವು, ಶಾಲಾ ಪೂರ್ವ ಮಟ್ಟದಲ್ಲಿ ಹಾಗೂ ಸಮನ್ವಯ ಶಾಲೆಗಳು ಹಾಗೂ ವಿಶೇಷ ಶಾಲೆಗಳಲ್ಲಿರುವ ಶ್ರವಣ ದೋಷವುಳ್ಳ ಮಕ್ಕಳ ಬೋಧನೆಗಾಗಿ ಅಗತ್ಯವಿರುವ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಜೊತೆ-ಜೊತೆಗೆ, ಸೂಕ್ತ ತರಬೇತಿ ಕಾರ್ಯಕ್ರಮಗಳು ಮತ್ತು ಅಗತ್ಯಾನುಸಾರ ಸಂಶೋಧನೆಗಳನ್ನು ಸಹ ಕೈಗೊಳ್ಳುತ್ತದೆ.

ದೀರ್ಘಾವಧಿಯ ತರಬೇತಿ ಕಾರ್ಯಕ್ರಮಗಳು:

  • ಡಿಇಸಿಎಸ್--ಹೆಚ್.: ಆರಂಭಿಕ ಬಾಲ್ಯದ ವಿಶೇಷ ಶಿಕ್ಷಣದಲ್ಲಿ ಡಿಪ್ಲೊಮಾ: (ಶ್ರವಣದೋಷ)
  • ಬಿ.ಇಡಿ.ಎಸ್ಪಿಎಲ್.ಇಡಿ(ಹೆಚ್ಐ): ವಿಶೇಷ ಶಿಕ್ಷಣದಲ್ಲಿ ಶಿಕ್ಷಣ ಪದವಿ (ಶ್ರವಣ ದೋಷ)
  • ಎಂ.ಇಡಿ.ಎಸ್ಪಿಎಲ್.ಇಡಿ(ಹೆಚ್ಐ): ವಿಶೇಷ ಶಿಕ್ಷಣದಲ್ಲಿ ಸ್ನಾತಕ ಶಿಕ್ಷಣ ಪದವಿ(ಶ್ರವಣ ದೋಷ)
  • ವಿಶೇಷ ಶಿಕ್ಷಣದಲ್ಲಿ ಪಿಹೆಚ್.ಡಿ

ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳು

  • ಕಾರ್ಯಗಾರಗಳು
  • ವಿಚಾರಸಂಕಿರಣಗಳು
  • ಸಮ್ಮೇಳನಗಳು
  • ಪೋಷಕರಿಂದ ಪೋಷಕರಿಗೆ ಸಹಾಯ ಕಾರ್ಯಕ್ರಮ (ಪಿಹೆಚ್ ಪಿಪಿ)

ಬಿ) ಸಂವಹನ ನ್ಯೂನತೆಯುಳ್ಳ ಮಕ್ಕಳಿಗೆ ವಿಶೇಷ ಶೈಕ್ಷಣಿಕ ಸೇವೆಗಳು

ಸೇವೆಗಳು

  • ಮುಖ್ಯ ಶೈಕ್ಷಣಿಕ ಸೇವೆಗಳು
  • ವಿಶೇಷ ಶೈಕ್ಷಣಿಕ ಪರೀಕ್ಷಾ ಘಟಕ

ಸಂಬಂಧಿತ ಸೇವೆಗಳು

  • ಪೋಷಕರ ಸಾಕ್ಷರತೆ ತರಬೇತಿ ಘಟಕ
  • ಪೋಷಕರ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ
  • ಮುಖ್ಯವಾಹಿನಿ ಶಾಲೆಗೆ ಸೇರಲು ಅಗತ್ಯವಿರುವ ಪಠ್ಯಕ್ರಮ

ಶಾಲಾ ವಯಸ್ಸಿನ ಮಕ್ಕಳಿಗೆ ಶೈಕ್ಷಣಿಕ ಸೇವೆಗಳು

  • ಪೋಷಕ-ಶಿಶು ಕಾರ್ಯಕ್ರಮ
  • ಶಾಲಾ ಪೂರ್ವ ಪೋಷಕರ  ಸಬಲೀಕರಣ ಕಾರ್ಯಕ್ರಮ
  • ಗುಂಪು ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಮಾಲೋಚನೆ ಸೇವೆಗಳು
  • ಶಾಲಾ-ಪೂರ್ವ ಸೇವೆಗಳು
  • ಶಾಲಾಪೂರ್ವ ಪೂರಕ ಸೇವೆಗಳು

ಶಾಲೆಗೆ ಈಗಾಗಲೇ ಪ್ರವೇಶ ಪಡೆದಿರುವ/ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಶೈಕ್ಷಣಿಕ ಸೇವೆಗಳು

  • ಪಠ್ಯಕ್ರಮ ಬೆಂಬಲ ಸೇವೆಗಳು
  • ವ್ಯಕ್ತಿಗತ ಶಿಕ್ಷಣ ಕಾರ್ಯಕ್ರಮ
  • ಅನೌಪಚಾರಿಕ ಶಿಕ್ಷಣ
  • ಪ್ರಾಯೋಗಿಕ ಶೈಕ್ಷಣಿಕ ತರಬೇತಿ

  • ಪುಸ್ತಕ ಹಾಗೂ ಆಟಿಕೆಗಳ ಗ್ರಂಥಾಲಯ (ಲಿಬೋಟಾಯ್)
  • ಶೈಕ್ಷಣಿಕ ತಂತ್ರಜ್ಞಾನ ಪ್ರಯೋಗಾಲಯ

ವಿಭಾಗದಲ್ಲಿ ಕೈಗೊಳ್ಳುವ ಇತರ ಮುಖ್ಯ ಕಾರ್ಯಕ್ರಮಗಳು

1. ಬೇಸಿಗೆ ಶಿಬಿರ

2. ವಾರ್ಷಿಕ ದಿನ

3. ಸ್ವಾತಂತ್ರ್ಯ ದಿನ

4. ಗಣೇಶ ಹಬ್ಬ

5. ಓಣಂ ಮತ್ತು ಈದ್ ಆಚರಣೆ

6. ಮಕ್ಕಳ ದಿನ

7. ದೀಪಾವಳಿ ಆಚರಣೆ

8. ವಿಕಲಾಂಗ ವ್ಯಕ್ತಿಗಳ ಅಂತರಾಷ್ಟ್ರೀಯ ದಿನ

ಮಕ್ಕಳಿಗಾಗಿ ಸಂಪನ್ಮೂಲ ವಸ್ತುಗಳ ಅಭಿವೃದ್ಧಿ

 

ಕೋರ್ ಶೈಕ್ಷಣಿಕ ಸೇವೆಗಳು

ಸಹಾಯಕ ಸೇವೆಗಳು

ಆರೈಕೆದಾರರು ಮತ್ತು ಶಿಕ್ಷಕರಿಗೆ ಬೆಂಬಲ ಸೇವೆಗಳು

ಇಲಾಖೆಯಲ್ಲಿನ ಘಟನೆಗಳು

ಮಕ್ಕಳಿಗಾಗಿ ಸಂಪನ್ಮೂಲ ವಸ್ತುಗಳ ಅಭಿವೃದ್ಧಿ

 

ಸಂಪನ್ಮೂಲಗಳು ಮತ್ತು ಮೂಲಸೌಕರ್ಯ

ಕಟ್ಟಡಗಳು

• ವಿಭಾಗಾಧ್ಯಕ್ಷರ ಕೊಠಡಿ
• ಕಚೇರಿ - 1 ಕ್ಯಾಬಿನ್
• ಬೋಧಕ ಸಿಬ್ಬಂದಿಯ ಕೊಠಡಿಗಳು - 2 ಕೊಠಡಿಗಳು
• ಸಿಬ್ಬಂದಿಯ ಕೊಠಡಿ – ೧೦ ಕ್ಯುಬಿಕಲ್ ಗಳುಳ್ಳ 1 ಕೊಠಡಿ
• SEA - U 2 ಕ್ಯಾಬಿನ್‌ಗಳು
• ತರಗತಿ ಕೊಠಡಿಗಳು - 21 ಕೊಠಡಿಗಳು
• ಕಂಪ್ಯೂಟರ್ ತರಬೇತಿ ಕೊಠಡಿ
• ಪ್ರತಿಬಿಂಬಿತ ಗೋಡೆಗಳು ಹಾಗೂ ಆಡಿಯೋ ದೃಶ್ಯದ ಸೌಲಭ್ಯಗಳುಳ್ಳ ಆಡಿಯೋ ವಿಷುಯಲ್ ಕೊಠಡಿ 
• LiBoToy - 1 ಕೊಠಡಿ ಮತ್ತು ಡಿಸ್ಪ್ಲೇ ಕಾರಿಡಾರ್
• SUMERU - ಧ್ವನಿ ಚಿಕಿತ್ಸೆಗಾಗಿ  2 ಕೊಠಡಿಗಳು
• 1 ಪೋಷಕ ಶಿಶು ಕಾರ್ಯಕ್ರಮ - 1 ಕೊಠಡಿ ಮತ್ತು ಸಭಾಂಗಣದಲ್ಲಿ ತೆರೆದ ಸ್ಥಳ
• Edutech ಲ್ಯಾಬ್ - 1 ಕೊಠಡಿ
• ಸಲಕರಣೆ ಕೊಠಡಿ - 1 ಕೊಠಡಿ
• ಬೋಧನಾ ಕಲಿಕಾ ಸಾಮಗ್ರಿ ಕೊಠಡಿ
• ಪ್ರಾರ್ಥನಾ ಮಂದಿರ

ಮೊದಲ ಮಹಡಿ/ಟೆರೇಸ್

• ಗೆಟ್-ಟುಗೆದರ್-ಕಮ್-ಮನರಂಜನಾ ಪ್ರದೇಶ
• ಯು-ಸೇಫ್
• 1 ಸಂವೇದನಾ ಸಾಮಗ್ರಿಗಳುಳ್ಳು ಕೊಠಡಿ
• 1 ಸ್ಯಾಂಡ್ ಪ್ಲೇ ಸ್ಟೇಷನ್
• 1 ದೃಶ್ಯ ಪ್ರಚೋದನೆಗಾಗಿ ಡಾರ್ಕ್ ರೂಮ್

• ಆಕ್ಟಿವ್ ಸ್ಟುಡಿಯೋ(Activstudio) ಸಾಫ್ಟ್‌ವೇರ್‌ವುಳ್ಳ ಸ್ಮಾರ್ಟ್ ಬೋರ್ಡ್

• FM ಶ್ರವಣ ಸಾಧನಗಳು

ಸಂಪನ್ಮೂಲ ವಸ್ತುಗಳ ವೀಡಿಯೊ